ಮಡಿಕೇರಿ, ಜೂ. 14: ಹೈಸೊಡ್ಲ್ಲೂರು ಗ್ರಾಮದ ಗ್ಲೆರ್‍ಲೋರ್ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಟಾಟಾ ಟೀ ಎಸ್ಟೇಟ್‍ನ ವ್ಯವಸ್ಥಾಪಕ ಮಂಡೇಪಂಡ ಅಯ್ಯಪ್ಪ, ಶಾಲೆಯ ಮುಖ್ಯೋಪಧ್ಯಾಯ ಪಿ.ಪಿ. ಸುರೇಶ್, ಸಹ ಶಿಕ್ಷಕರು ಮತ್ತು ಸಿಬ್ಬಂದಿವರ್ಗದವರು ಹಾಗೂ ಶಾಲಾ ವಿದ್ಯಾರ್ಥಿಗಳು ಜೊತೆಗೂಡಿ ಶಾಲಾ ಆವರಣದಲ್ಲಿ ಮಾವು, ಹಲಸು, ಸೀಬೆ, ಸಪೋಟ, ಮತ್ತು ದಾಳಿಂಬೆ ಗಿಡಗಳನ್ನು ನೆಟ್ಟರು.