ಮಡಿಕೇರಿ, ಅ. 10: ‘ದುಷ್ಟ ಶಿಕ್ಷಕಿ ಶಿಷ್ಟರ ರಕ್ಷಣೆ’ಯ ಸಂಕೇತವಾಗಿರುವ ವಿಜಯದಶಮಿ ಆಚರಣೆ ತಾ. 11 ರಂದು (ಇಂದು) ನಡೆಯಲಿದೆ. ನಾಡಿನಾದ್ಯಂತ ವಿಜಯದಶಮಿಯನ್ನು ಜನೋತ್ಸವವಾಗಿ ಆಚರಿಸುತ್ತಿದ್ದು, ಎಲ್ಲೆಲ್ಲೂ ಸಂಭ್ರಮ ಮನೆ ಮಾಡಿದೆ. ಮೈಸೂರು ದಸರಾದಷ್ಟೇ ವಿಖ್ಯಾತಿ ಪಡೆದಿರುವ ಮಡಿಕೇರಿ ದಸರಾ ವಿಭಿನ್ನವಾಗಿ ರಾತ್ರಿ ವೇಳೆ ಆಚರಿಸಲ್ಪಡುತ್ತಿದೆ. ಅಂತೆಯೇ ವಾಣಿಜ್ಯ ನಗರಿ ಗೋಣಿಕೊಪ್ಪದಲ್ಲೂ ದಸರಾ ಆಚರಣೆಗೆ ಸಜ್ಜಾಗಿದೆ.

ಮಡಿಕೇರಿ ಹಾಗೂ ಗೋಣಿಕೊಪ್ಪಲುವಿನಲ್ಲಿ ರಾತ್ರಿಯಿಡೀ ದಶಮಂಟಪಗಳ ಶೋಭಾಯಾತ್ರೆ ಮೇಳೈಸಲಿದೆ.