ಸುಂಟಿಕೊಪ್ಪ, ಜೂ. 14: ವಿಧಾನ ಪರಿಷತ್ ನೂತನ ಸದಸ್ಯೆಯಾಗಿ ಆಯ್ಕೆಯಾದ ವೀಣಾ ಅಚ್ಚಯ್ಯ ಅವರನ್ನು ಹೋಬಳಿ ಕಾಂಗ್ರೆಸ್ ವತಿಯಿಂದ ಅದ್ಧೂರಿಯ ಸ್ವಾಗತ ಕೋರಲಾಯಿತು.

ಇಲ್ಲಿನ ಹೋಬಳಿ ಕಾಂಗ್ರೆಸ್ ಹಾಗೂ ನಗರ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಜಿಲ್ಲೆಗೆ ಆಗಮಿಸಿದ್ದ ಅವರನ್ನು ಕನ್ನಡ ವೃತ್ತದಲ್ಲಿ ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತ ಕೋರಿ ಬೀಳ್ಕೊಟರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಪಿ.ಎಂ. ಲತೀಫ್, ಕುಮುದ ಧರ್ಮಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಬಾರ ಅಧ್ಯಕ್ಷ ಟಿ.ಪಿ. ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್, ಹೋಬಳಿ ಅಧ್ಯಕ್ಷ ಎನ್.ಸಿ. ಪೊನ್ನಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಸೋಮಯ್ಯ, ಮಾಜಿ ಅಧ್ಯಕ್ಷ ಸಬಾಸ್ಟೀನ್, ಮಹೇಶ್, ಹಿರಿಯ ಮುಖಂಡ ಎಂ.ಎ. ವಸಂತ್, ಹಾಗೂ ಕಾರ್ಯಕರ್ತರು ಇದ್ದರು.