ಮಡಿಕೇರಿ, ಜೂ. 9: ಕೊಂಡಂಗೇರಿಯ ಸಮೀಪದ ಎಲಿಯಂಗಾಡ್ ಮಸ್ಜಿದುರ್ರಶಾದ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪಿ.ಎ. ಯೂಸೂಫ್ ಪುನರಾಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಜೆ.ಎ. ಉಮ್ಮರ್, ಕೋಶಾಧಿಕಾರಿಯಾಗಿ ಪಿ.ಎಂ. ಮಮ್ಮು, ಪ್ರಧಾನ ಕಾರ್ಯದರ್ಶಿಯಾಗಿ ಎ.ಎ ಮಹಮದ್, ಸಹಕಾರ್ಯದರ್ಶಿಯಾಗಿ ಪಿ.ಹೆಚ್. ಉಸ್ಮಾನ್ ಆಯ್ಕೆಗೊಂಡಿದ್ದಾರೆ.

ಕೆ.ಎ. ಜಕರಿಯಾ, ಪಿ.ಹೆಚ್. ಅಬ್ಬಾಸ್, ಕೆ.ಎಂ. ಮಹಮೂದ್, ಕೆ. ಬಾವುಞÂ, ಪಿ.ಹೆಚ್. ಅಹಮದ್ ಹಾಗೂ ಜೆ.ಎಂ. ಇಸಾಕ್ ಇವರುಗಳನ್ನು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆಯ್ಕೆಮಾಡಲಾಯಿತು. ಅಧ್ಯಕ್ಷ ಪಿ.ಎ. ಯೂಸುಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯನ್ನು ಹೆಚ್.ಹೆಚ್. ಮಹಮೂದ್ ಸಅದಿ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಎ.ಎ. ಮಹಮದ್ ಸ್ವಾಗತಿಸಿ, ಪಿ.ಹೆಚ್. ಉಸ್ಮಾನ್ ವಂದಿಸಿದರು.