ಕುಶಾಲನಗರ, ಜೂ. 11: ಪೊಲೀಸ್ ಇಲಾಖೆಯ ಆಡಳಿತಾತ್ಮಕ ಕಚೇರಿಗಳು ಸೇರಿದಂತೆ ರಾಜ್ಯದ ಪೊಲೀಸರ ಕೆಲವು ಬೇಡಿಕೆ ಕೊನೆಗೂ ಈಡೇರಿದಂತಾಗಿದೆ. ಈ ತಿಂಗಳ 4 ರಂದು ಸಾಮೂಹಿಕ ಗೈರು ಹಾಜರಾಗುವ ಬೆದರಿಕೆಯೊಡ್ಡಿ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದ ಸಮಾಜವನ್ನು ಕಾಯುವ ಪೊಲೀಸರಿಗೆ ಕೆಲವು ಕನಿಷ್ಟ ಬೇಡಿಕೆಗಳನ್ನು ತಕ್ಷಣದಿಂದಲೇ ಕಾರ್ಯಗತವಾಗುವಂತೆ ಸರಕಾರ ನೋಡಿಕೊಂಡಿದೆ.

ತಿಂಗಳ ಎರಡನೇ ಶನಿವಾರ ರಾಜ್ಯದ ಎಲ್ಲಾ ಪೊಲೀಸ್ ಆಡಳಿತಾತ್ಮಕ ಕಚೇರಿಗಳಿಗೆ ಸರಕಾರ ಅಧಿಕೃತವಾಗಿ ರಜೆ ಘೋಷಣೆ ಮಾಡಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳ ವೃತ್ತ, ಡಿವೈಎಸ್ಪಿ, ಎಸ್‍ಪಿ ಹಾಗೂ ವಲಯಗಳ ಐಜಿಪಿ ಕಚೇರಿಗಳು ಮುಚ್ಚಲ್ಪಟ್ಟಿದ್ದವು. ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೂ ವಾರದ ರಜೆ ನೀಡಲು ಸರಕಾರ ಆದೇಶ ನೀಡಿದ್ದು, ಇದೀಗ ದಿನದ 24 ಗಂಟೆ ಕರ್ತವ್ಯದಲ್ಲಿದ್ದು ಅಸಹನೆಗೆ ದೂಡಲ್ಪಟ್ಟಿದ್ದ ಪೊಲೀಸರು ಕನಿಷ್ಟ ನಿಟ್ಟುಸಿರು ಬಿಡುವಂತಾಗಿದೆ.