ಸೋಮವಾರಪೇಟೆ, ಜೂ. 8: ಇಲ್ಲಿನ ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿಗೆ ಮುಸುಕಿನ ಜೋಳದ ಉತ್ತಮ ತಳಿಯ ಬೀಜಗಳನ್ನು ಸಹಾಯಧನದಲ್ಲಿ ವಿತರಿಸಲಾಗುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ. ರಾಜಶೇಖರ್ ತಿಳಿಸಿದ್ದಾರೆ.

ತಾಲೂಕಿನ ಗುಡ್ಡೆಹೊಸೂರು, ಕುಶಾಲನಗರ, ಕೂಡಿಗೆ, ತೊರೆನೂರು, ಶನಿವಾರಸಂತೆ, ಸಹಕಾರ ಸಂಘಗಳಲ್ಲಿ ಈಗಾಗಲೇ ದಾಸ್ತಾನು ಇರಿಸಲಾಗಿದೆ. ಮುಸುಕಿನ ಜೋಳ ತಳಿಗಳಾದ ಹೈಷೆಲ್, ಗಂಗಾಕಾವೇರಿ. ಜಿ.ಕೆ. 3059, ಸಿ.ಪಿ. 818 ಪೈನಿಯಾರ್. 30 ಬಿ.07, ಕಾವೇರಿ ಸೀಡ್ಸ್. 25 ಕೆ. 55, ಮೆಟಾಹೇಲಿಕ್ಸ್ (ಎಂ.ಎಂ. 7705), ಡೆಲ್ಟಾ 1000ಎಂ ತಳಿಗಳು ಲಭ್ಯವಿದೆ.

ಸಾಮಾನ್ಯ ವರ್ಗಕ್ಕೆ 20ರೂ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದವರಿಗೆ 5 ಕೆ.ಜಿ. ಬೀಜಕ್ಕೆ 30 ರೂ ಸಹಾಯಧನ ಲಭ್ಯವಿದೆ ಎಂದು ರಾಜಶೇಖರ್ ತಿಳಿಸಿದ್ದಾರೆ.