ಗುಡ್ಡೆಹೊಸೂರು, ಜೂ. 9: ಇಲ್ಲಿಗೆ ಸಮೀಪದ ಬಾಳುಗೊಡು ಎಂಬಲ್ಲಿ ಅಲ್ಲಿನ ನಿವಾಸಿಗಳಾದ ಶಾಂತಕುಮಾರ (ಸುಜಾ) ಮತ್ತು ಅಪ್ಪು ಎಂಬವರು ತೆರಳುತ್ತಿದ್ದ ಸ್ಕೂಟರಿಗೆ ಹಿಂಬದಿಯಿಂದ ಮಾರುತಿ ವ್ಯಾನ್ ಡಿಕ್ಕಿಪಡಿಸಿ ಕಾರುಚಾಲಕ ಪರಾರಿಯಾಗಿದ್ದಾನೆ. ಸುಜಾ ಮತ್ತು ಅಪ್ಪು ಇಬ್ಬರ ಕೈಗಳಿಗೂ ಗಂಭೀರ ಗಾಯಗಳಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.