ಮಡಿಕೇರಿ, ಅ. 10: ದುಷ್ಟ ಶಕ್ತಿಗಳನ್ನು ನಿಗ್ರಹಿಸಲು ಬಳಸಲಾದ ಆಯುಧಗಳನ್ನು ಪೂಜಿಸುವ ಪ್ರತೀತಿಯೊಂದಿಗೆ ನಡೆದುಕೊಂಡು ಬರುತ್ತಿರುವ ಆಯುಧಾ ಪೂಜೋತ್ಸವ ವನ್ನು ನಾಡಿನಾದ್ಯಂತ ಎಲ್ಲರೂ ಸಂಭ್ರಮದಿಂದ ಆಚರಿಸಿದರು. ತಮ್ಮ ಮನೆಗಳಲ್ಲಿರುವ ಅತ್ಯಾರಗಳು, ಬಂದೂಕು, ವಾಹನಗಳು, ಯಂತ್ರಗಳು, ಅಂಗಡಿ ಮಳಿಗೆಗಳನ್ನು, ಕೈಗಾರಿಕಾ ಘಟಕಗಳು ಸಿಂಗರಿಸಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಲಾ ಯಿತು. ಬೆಳಿಗ್ಗೆಯಿಂದ ಸಂಜೆವರೆಗೂ ಪೂಜೆ ನೆರವೇರಿಸಲಾ ಯಿತು. ದೇವಾಲಯಗಳಲ್ಲೂ ಆಯುಧಾ ಪೂಜೆ ಪ್ರಯುಕ್ತ ವಿಶೇಷ ಪೂಜಾಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.