ಸೋಮವಾರಪೇಟೆ, ಅ. 10: ಸೋಮವಾರಪೇಟೆಯ ದಸರಾ ಜನೋತ್ಸವ ಎಂದೇ ಹೆಸರಾಗಿರುವ ಆಯುಧ ಪೂಜೋತ್ಸವ ಸಮಾರಂಭ ಸಾವಿರಾರು ಸಾರ್ವಜನಿಕರ ಭಾಗಿತ್ವದೊಂದಿಗೆ ಜನೋತ್ಸವದ ರಂಗು ಪಡೆದು, ಹತ್ತು ಹಲವು ಕಾರ್ಯಕ್ರಮಗಳ ಮೂಲಕ ವೈವಿಧ್ಯಮಯವಾಗಿ ನಡೆಯಿತು.

ಸೋಮವಾರಪೇಟೆ ನಗರ ಸೇರಿದಂತೆ ಗ್ರಾಮೀಣ ಪ್ರದೇಶ ಹಾಗೂ ಉತ್ತರ ಕೊಡಗಿನ ಹಲವು ಭಾಗಗಳ ದಸರಾ ಎಂದೇ ಖ್ಯಾತಿಯಾಗಿರುವ ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಆಯೋಜಿಸುವ ಅದ್ಧೂರಿ ಆಯುಧ ಪೂಜೋತ್ಸವ ಸಂಭ್ರಮದಿಂದ ಜರುಗಿತು. ಪೂಜೋತ್ಸವದ ಅಂಗವಾಗಿ ಸೋಮವಾರಪೇಟೆ ನಗರವನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು.

ಆಯುಧ ಪೂಜೆಯನ್ನು ಈ ಭಾಗದ ಜನರು ದಸರಾ ನಾಡಹಬ್ಬದಂತೆಯೇ ಸಂಭ್ರಮದಿಂದ ಆಚರಿಸುತ್ತಿದ್ದು,