ಸುಂಟಿಕೊಪ್ಪ, ಜೂ. 11: ಇಲ್ಲಿಗೆ ಸಮೀಪದ ಗದ್ದೆಹಳ್ಳದ ವಂದನ ಬಾರ್ ಮುಂಭಾಗ ಇಂದು ಮುಂಜಾನೆ ಅಪರಿಚಿತ ವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ತುಂಡಾಗಿ ಸುಮಾರು ರೂ. 15,000ದಷ್ಟು ನಷ್ಟ ಸಂಭವಿಸಿದೆ ಎಂದು ಸುಂಟಿಕೊಪ್ಪ ಚೆಸ್ಕಾಂ ಕಿರಿಯ ಅಭಿಯಂತರ ಬಸವರಾಜು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.