ಮಡಿಕೇರಿ, ಜೂ. 10: ಇದೇನಪ್ಪಾ ಮಹದೇವಪೇಟೆಯಲ್ಲಿ ಗದ್ದೆಯಿದೆಯಾ ಎಂದು ಆಶ್ಚರ್ಯವೇ..., ಗದ್ದೆಯಿಲ್ಲ. ಆದರೆ ರಸ್ತೆಯೇ ಇದೀಗ ಕೆಸರು ಗದ್ದೆಯಾಗಿದೆ. ಮಳೆ ಬಂದು ರೈತ ಗದ್ದೆಗಿಳಿಯದಿದ್ದರೂ, ಮಹದೇವಪೇಟೆಗೆ ಬಂದರೆÉ ಕೆಸರುಗದ್ದೆಗೆ ಇಳಿಯಲೇಬೇಕು. ಮಳೆಗಾಲದಲ್ಲಿ ರಸ್ತೆ ವಿಸ್ತರಣೆ ಕಾರ್ಯ ಕೈಗೊಂಡಿರುವದರಿಂದಾಗಿ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಸಂತೆ ದಿನವಾದ ಇಂದು ಕೆಸರಿನ ನಡುವೆ ನಡೆದಾಡಲು ಹರಸಾಹಸ ಪಟ್ಟರೆ, ರಸ್ತೆ ಬದಿ ವ್ಯಾಪಾರಿಗಳಂತೂ ಬೇಡಪ್ಪ ಸಹವಾಸ ಎಂದು ಹಲುಬುತ್ತಿದ್ದರೂ ಎಲ್ಲರ ಬಾಯಲ್ಲೂ ‘ಶಾಪ'ವೇ ಕೇಳಿ ಬರುತ್ತಿತ್ತು.

- ಸಂತೋಷ್.