ವೀರಾಜಪೇಟೆ, ಜೂ. 11: ಧರ್ಮದ ಆಧಾರದ ಮೇಲೆ ಕಾನೂನುಗಳು ಹುಟ್ಟಿಕೊಂಡಿದೆ. ನಾವು ಧರ್ಮವನ್ನು ಗೌರವಿಸಿದರೆ ಧರ್ಮವು ನಮ್ಮನ್ನು ಗೌರವಿಸುತ್ತದೆ ಎಂದು 2ನೇ ಜಿಲ್ಲಾ ಸತ್ರ ನ್ಯಾಯಧೀಶ ಟಿ.ಎಂ ನಾಗರಾಜ್ ಹೇಳಿದರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ವೀರಾಜಪೇಟೆ, ಪಟ್ಟಣ ಪಂಚಾಯಿತಿ, ಪೊಲೀಸ್ ಇಲಾಖÉ, ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯನ ರಕ್ಷಣೆಗೆ 36 ಸಾವಿರಕ್ಕೂ ಮೇಲ್ಪಟ್ಟು ಕಾನೂನುಗಳಿವೆ. ಆದರೂ ಕೂಡ ದಿನನಿತ್ಯ ಜೀವನ ಶೈಲಿಗೆ ಅನುಗುಣವಾಗಿ ಕಾನೂನುಗಳು ಹುಟ್ಟಿಕೊಳ್ಳುತ್ತಿವೆ. ನಾವು ಪರಿಸರವನ್ನು ನಾಶ ಮಾಡುತ್ತಿರುವದರಿಂದ ಮಾನವ ಹಾಗೂ ಪ್ರಾಣಿಗಳ ನಡುವೆ ಸಂಘರ್ಷ ನಡೆಯುತ್ತಿದೆ ಎಂದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ತಸ್ನಿಂ ಅಕ್ತರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿ ಎಲ್ಲರಿಗೂ ಕಾನೂನಿನ ಅರಿವು ಇರುವದಿಲ್ಲ. ಇಂತಹ ಕಾನೂನು ಅರಿವು ಕಾರ್ಯಕ್ರಮಗಳನ್ನು ನಡೆಸುವದರಿಂದ ಸುಲಭವಾಗಿ