ಗೋಣಿಕೊಪ್ಪಲು, ಡಿ.11: ವಿವಾಹಿತೆಯಾದಲ್ಲಿ ಮಾತ್ರ್ರ ‘ಅಮ್ಮ’ ನ ಪಟ್ಟ ಎಂದು ತಿಳಿದರೆ ತಪ್ಪಾದೀತು. ತಪ್ಪನ್ನು ತಿದ್ದುವ, ಬುದ್ಧಿ ಹೇಳುವ, ಒಳ್ಳೆ ವ್ಯಕ್ತಿತ್ವವನ್ನು ಬೆಳೆಸುವವಳು ತಾಯಿ ಸ್ಥಾನ ಪಡೆಯುತ್ತಾಳೆ. ಮಕ್ಕಳನ್ನು ಕೆಟ್ಟತನಕ್ಕೆ ದೂಡುವವಳು ಮಾರಿಯಾಗುತ್ತಾಳೆ. ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ ಬೋಧನೆ ಮಾಡುವವಳು ತಾಯಿ. ಮಹಿಳೆಯರಿಗೆ ತಾಯಿ ಸ್ಥಾನಮಾನಕ್ಕಿಂತ ದೊಡ್ಡ ಸಮಾನತೆ ಬೇಕಿಲ್ಲ ಎಂದು ಶಾಸಕಿ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಕುಂತಲಾ ಶೆಟ್ಟಿ ವ್ಯಾಖ್ಯಾನಿಸಿದರು.

ಗೋಣಿಕೊಪ್ಪಲು ಕಾವೇರಿ ಕಾಲೇಜು ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಗೋಣಿಕೊಪ್ಪಲು ಜನನಿ ಪೆÇಮ್ಮಕ್ಕಡ ಕೂಟ ಮತ್ತು ಕಾವೇರಿ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಜರುಗಿದ ರಾಜ್ಯ ಮಟ್ಟದ ಪೆÇಮ್ಮಕ್ಕಡ ನಮ್ಮೆವನ್ನು ಬೆಳ್ಳಿಪರದೆಯ ಮೇಲಿನ ಕೊಡವ ಅಕಾಡೆಮಿ ಪ್ರಾಯೋಜಿತ ‘ಸಾಂಸ್ಕೃತಿಕ ಸಾಕ್ಷ್ಯ ಚಿತ್ರ’ವನ್ನು ರಿಮೋಟ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮನೆಯಲ್ಲಿ ಹೆಣ್ಣು ದುಷ್ಟ ಶಿಕ್ಷಕಿಯಾಗಿ, ದುರ್ಗೆಯಾಗಿ, ಧಾನ್ಯಲಕ್ಷ್ಮಿ, ಭಾಗ್ಯಲಕ್ಷಿ, ವಿದ್ಯಾಲಕ್ಷ್ಮಿಯಾಗಿ ತನ್ನ ಕರ್ತವ್ಯವನ್ನು ನಿಭಾಯಿಸಬೇಕಾಗುತ್ತದೆ. ಮಹಿಳೆಯರು ಇಂದು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಾಗಿಲ್ಲ. ಕಲ್ಪನಾ ಚಾವ್ಲಾ, ಕಿರಣ್ ಬೇಡಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಧುಮಿಕಿದ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ, ಮಂಗಳೂರು ಉಲ್ಲಾಳ ಮೂಲದ ಅಬ್ಬಕ್ಕ ರಾಣಿ ಮುಂತಾದವರು ಮಹಿಳೆಗೆ ವೀರತ್ವ ಹಾಗೂ ಗೌರವದ ಸ್ಥಾನವನ್ನು ದೊರಕಿಸಿಕೊಟ್ಟಿದ್ದಾರೆ.

ರಾಜ್ಯ ಮಟ್ಟದಲ್ಲಿ ಮಹಿಳೆಯರನ್ನು ಸೇರಿಸಿ ಕಾರ್ಯಕ್ರಮ ಆಯೋಜನೆ ಮಾಡಿರುವದು ಕಡಿಮೆ. ಈ ನಿಟ್ಟಿನಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮ ಪ್ರಶಂಸನೀಯ ಎಂದರಲ್ಲದೆ, ಹೆಣ್ಣು ಸಂಸಾರದ ಕಣ್ಣು ಎಂಬ ನಾಣ್ನುಡಿ ಇದೆ. ದಾರಿ ತಪ್ಪಿದರೆ ಹುಣ್ಣು. ಕೇವಲ ಅಡುಗೆ ಮನೆಗೆ ಸೀಮಿತವಾಗದೆ, ಆತ್ಮಸ್ಥೈರ್ಯ ದೊಂದಿಗೆ ದೇಶ ಆಳುವ ಶಕ್ತಿಯನ್ನೂ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಬ್ಯಾರಿ ಅಕಾಡೆಮಿ, ತುಳು ಅಕಾಡೆಮಿ ಯಲ್ಲಿಯೂ ಮಹಿಳಾ ಪ್ರಧಾನ ಕಾರ್ಯಕ್ರಮ ನಡೆದಿಲ್ಲ. ಮಹಿಳೆಯರು ಕೇವಲ ಮೀಸಲಾತಿಗಾಗಿ ಕಾದು ಕೂರಬಾರದು. ತಾನು ಪುತ್ತೂರು ಸಾಮಾನ್ಯ ಕ್ಷೇತ್ರದಿಂದ ಪುರುಷರ ವಿರುದ್ಧ ಚುನಾವಣೆಯಲ್ಲಿ ಗೆದ್ದು ವಿಧಾನ ಸಭೆ ಪ್ರವೆಶಿಸಿರುವದಾಗಿ ಹೇಳಿದ ಅವರು, ಭಾರತದಲ್ಲಿ ಮೂರು ವರ್ಷದಿಂದ 90 ವರ್ಷದ ಮಹಿಳೆಯರ ಮೇಲೂ ದೌರ್ಜನ್ಯ ನಡೆಯುತ್ತಿರುವದು ಅಕ್ಷಮ್ಯ. ಇಂದಿನ ಸಿನೆಮಾ ಹಾಗೂ ಟಿವಿ ಧಾರವಾಹಿಗಳೂ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.

(ಮೊದಲ ಪುಟದಿಂದ) ಕೊಡವ ದಂಪತಿಗಳು ತಮ್ಮ ಮಕ್ಕಳೊಂದಿಗೆ ಕನಿಷ್ಟ 30 ನಿಮಿಷವಾದರೂ ದಿನಕ್ಕೆ ವಿನಿಯೋಗಿಸಬೇಕು. ಸಂಸ್ಕಾರ ಹೇಳಿಕೊಡಬೇಕು. ಕುಟುಂಬ ಏಳಿಗೆಯೊಂದಿಗೆ ಸಾಮಾಜಿಕ ಕಳಕಳಿಯ ಪ್ರತಿರೂಪ ಹೆಣ್ಣು ಎಂದು ಶಕುಂತಲಾ ಶೆಟ್ಟಿ ಬಣ್ಣಿಸಿದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಹೆಣ್ಣುಮಕ್ಕಳ ಜವಾಬ್ದಾರಿ ತಾಯಂದಿರ ಮೇಲಿದೆ. ಕೊಡಗಿನಲ್ಲಿ ಮಹಿಳೆಯರು ರಾಜಕಾರಣಿಗಳಾಗಿಯೂ ಉತ್ತಮ ಸಾಧನೆ ತೋರಿದ್ದಾರೆ. ಕೊಡವ ಸಂಪ್ರದಾಯದಲ್ಲಿ ವಧೂ-ವರರಿಗೆ ತಾಯಿಯೇ ಮಾಲೇ ಹಾಕುವ ಸಂಪ್ರದಾಯ ಇದೆ. ಜಿಲ್ಲೆಯಲ್ಲಿ ಅಕಾಡೆಮಿ ವತಿಯಿಂದ ಹಲವು ಉತ್ತಮ ಕಾರ್ಯಕ್ರಮಗಳು ಮೂಡಿ ಬಂದಿದ್ದು, ಕೊಡವಾಮೆಗೆ ನಾವೆಲ್ಲಾ ಒತ್ತು ನೀಡಬೇಕು. ಕೊಡಗಿನ ಹೊರಗೂ ಗೌರವ ಸ್ಥಾನ ಮಾನ ಕಾಪಾಡುವ ನಿಟ್ಟಿನಲ್ಲಿ ನಮ್ಮೆಲ್ಲರಿಗೂ ಜವಾಬ್ದಾರಿ ಇದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯೆ ತೀತಿರ ರೇಖಾ ವಸಂತ್ ಅವರು, ಪೆÇಮ್ಮಕ್ಕಡ ನಮ್ಮೆಗೆ ಸರ್ಕಾರ ವಿಶೇಷ ಅನುದಾನ ನೀಡಿದೆ. ಹೆಣ್ಣು ಕೇವಲ ಸಂಸಾರದ ಕಣ್ಣಲ್ಲ, ಪ್ರಕೃತಿಯ ಕಣ್ಣು. ಕೊಡಗಿನಲ್ಲಿ ಹೆಣ್ಣಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿರುವದು ದೇವರ ಆಶೀರ್ವಾದ. ಜಿಲ್ಲೆಯಲ್ಲಿ ಮಹಿಳೆಯರನ್ನು ಬಿಟ್ಟು ಆಚರಿಸುವ ಯಾವದೇ ಸಮಾರಂಭವಿಲ್ಲ. ವಿವಾಹವಾಗುತ್ತಿದ್ದಂತೆ ಪತಿ ಮನೆಯಲ್ಲಿ ಸಮಾನ ಪಾಲುದಾರಿಕೆ ಯನ್ನು ಹೆಣ್ಣು ಹೊಂದುತ್ತಾಳೆ. ಕೊಡವ ಜನಾಂಗದಲ್ಲಿ ಗಂಡು ಮಗು ಜನನವಾದರೆ ಒಂದು ಸುತ್ತು ಗುಂಡು ಹಾರಿಸಲಾಗುತ್ತದೆ. ಹೆಣ್ಣು ಹುಟ್ಟಿದಾಗ ಅಡುಗೆಮನೆಯಲ್ಲಿ ತಳಿಯ ಮಣಿಯನ್ನು ನುಡಿಸಲಾಗುತ್ತದೆ. ಅಡುಗೆ ಮನೆಗೆ ಮತ್ತೊಂದು ಜನ ಸೇರ್ಪಡೆ ಎಂದು ಹೇಳಲಾಗುತ್ತದೆ. ಕೊಡಗಿನ ಚಳಿ, ಮಳೆ ಹವಾಗುಣಕ್ಕನು ಗುಣವಾಗಿ ವಿಶೇಷ ಆಹಾರವನ್ನು ದೇಹದ ಸದೃಡತೆಗಾಗಿ ತಯಾರಿಸುವ ಪರಿಪಾಠವಿದೆ. ಫಾಸ್ಟ್ ಫುಡ್‍ಗಳ ಭರಾಟೆಯಲ್ಲಿ ಕೊಡಗಿನ ಅಪೂರ್ವ ತಿಂಡಿ ತಿನಿಸುಗಳನ್ನು ಉಳಿಸುವ ನಿಟ್ಟಿನಲ್ಲಿ ಅಕಾಡೆಮಿಯ ವಿವಿಧ ಕಾರ್ಯಕ್ರಮದಲ್ಲಿ ಅಡುಗೆ ಸ್ಪರ್ಧೆಯನ್ನೂ ಏರ್ಪಡಿಸುತ್ತಾ ಬಂದಿದೆ.ಇಲ್ಲಿನ ಭಾಷೆ, ಸಂಸ್ಕೃತಿ, ಅಭಿಮಾನ, ನಾಡಿನ ಬಗ್ಗೆ ಪ್ರೀತಿ ಮೂಡಿಸುವ ನಿಟ್ಟಿನಲ್ಲಿ ಅಕಾಡೆಮಿ ತನ್ನದೇ ಆದ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ ಅವರು, ಕೊಡವ ಸಾಹಿತ್ಯ ಅಕಾಡೆಮಿಯು ಗುರಿ ಮೀರಿದ ಸಾಧನೆ ಮಾಡಿದೆ. ಕಳೆದ ಎರಡು ವರ್ಷಗಳಿಂದ ಮಹಿಳೆಯರಿಗೆ ಒತ್ತು ನೀಡಿ ಹಲವು ಕಾರ್ಯಕ್ರಮ ಗಳನ್ನು ಏರ್ಪಡಿಸಿದ್ದು, ಯಶಸ್ವಿ ಯಾಗಿದೆ. ಗೋಣಿಕೊಪ್ಪಲಿನಲ್ಲಿ ಇದೇ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಪೆÇಮ್ಮಕ್ಕಡ ನಮ್ಮೆ ಆಯೋಜನೆ ಮಾಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಆಕರ್ಷಣೀಯವನ್ನಾಗಿಸಲು ಅವಕಾಶ ಒದಗಿ ಬಂದಿದೆ ಎಂದು ಅಭಿಪ್ರಾಯಪಟ್ಟರು.

ಇಂದು 10.30 ಗಂಟೆ ಸುಮಾರಿಗೆ ಕೊಡವ ಅಕಾಡೆಮಿಯ ಧ್ವಜಾರೋಹಣ ನೆರವೇರಿಸಿದ ಬಾಳುಗೋಡು ಕೊಡವ ಸಮಾಜ ಒಕ್ಕೂಟದ ಪೆÇಮ್ಮಕ್ಕಡ ಘಟಕದ ಅಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ ಶುಭಕೋರಿದರು. ಕಾರ್ಯಕ್ರಮಕ್ಕೂ ಮುನ್ನ ಕಾವೇರಿ ಕಾಲೇಜು ಆವರಣದ ಕಾವೇರಿ ಮಾತೆಗೆ ನಮನ ಸಲ್ಲಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮಾಜಿ ಅಕಾಡೆಮಿ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ, ಮಾಜಿ ಜಿ.ಪಂ.ಅಧ್ಯಕ್ಷೆ ಶರೀನ್ ಸುಬ್ಬಯ್ಯ, ಗೋಣಿಕೊಪ್ಪಲು ಗ್ರಾ.ಪಂ.ಉಪಾಧ್ಯಕ್ಷೆ ಕಾವ್ಯ ಅಶ್ವಥ್, ಕಾವೇರಿ ವಿದ್ಯಾ ಸಂಸ್ಥೆಯ ನಿರ್ದೇಶಕಿ ಡಾ.ಜೆ.ಪೆÇನ್ನಮ್ಮ, ಮೈಸೂರು ಕಾವೇರಿ ಕೊಡಗು ಮಹಿಳಾ ಸಂಘದ ಅಧ್ಯಕ್ಷೆ ಬಲ್ಲಡಿಚಂಡ ಚೆರಿ ಪೆÇನ್ನಪ್ಪ, ಜನನಿ ಪೆÇಮ್ಮಕ್ಕಡ ಕೂಟದ ಅಧ್ಯಕ್ಷೆ ಪ್ರವಿ ಮೊಣ್ಣಪ್ಪ, ರಾಜ್ಯ ಜಾನಪದ ಪರಿಷತ್ ಪ್ರಶಸ್ತಿ ವಿಜೇತೆ ಕುಡಿಯರ ಶಾರದಾ, ಅಡುಗೆ ಸ್ಪರ್ಧೆ ಉದ್ಘಾಟಿಸಿದ ಮಂಗಳೂರು ವಿವಿ ಸಲಹಾ ಸಮಿತಿ ಸದಸ್ಯೆ ಪಟ್ಟಡ ರೀನಾ ಪ್ರಕಾಶ್, ರೇವತಿ ಪರಮೇಶ್ವರ್, ಸುಳ್ಳಿಮಾಡ ಗೌರಿ ನಂಜಪ್ಪ, ಮೂಕೈರಿರ ನಳಿನಾಕ್ಷಿ ಮುಂತಾದವರು ಪೆÇಮ್ಮಕ್ಕಡ ನಮ್ಮೆಯ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ಸಂದರ್ಭ ಮಚ್ಚಾಮಾಡ ಶಾಂತಿ ಕುಟ್ಟಪ್ಪ ಅವರ ಭಾವನೆರ ಕೂಪದಿ ಪುಸ್ತಕವನ್ನು ಉಳ್ಳಿಯಡ ಡಾಟಿ ಪೂವಯ್ಯ ಬಿಡುಗಡೆ ಮಾಡಿದರು.

ಉದ್ಘಾಟನಾ ಸಮಾರಂಭದಲ್ಲಿ ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ, ಪ್ರಮುಖರಾದ ಬಾವಿಕಟ್ಟಿ ಉಪಸ್ಥಿತರಿದ್ದರು. ಪ್ರಾರ್ಥನೆ ಚೇಂದಿರ ನಿರ್ಮಲಾ ಬೋಪಣ್ಣ, ನಿರೂಪಣೆ ಮಾದೇಟಿರ ಬೆಳ್ಳಿಯಪ್ಪ, ಶೀಲಾ ಬೋಪಣ್ಣ, ಸ್ವಾಗತ ಚೇಂದಿರ ಪ್ರಭಾ ಮಹೇಶ್ ಹಾಗೂ ವಂದನಾರ್ಪಣೆ ಯನ್ನು ಮುಲ್ಲೇಂಗಡ ಬೇಬಿ ಚೋದಮ್ಮ ನಿರ್ವಹಿಸಿದರು.

ಕೊಡವ ಸಾಹಿತ್ಯ ಪ್ರಾಕಾರ ಪ್ರದರ್ಶನ ಮತ್ತು ಮಾರಾಟ, ಸ್ವ ಸಹಾಯ ಸಂಘಗಳ ತಿನಿಸು ಮಾರಾಟ, ತೈಲ ಚಿತ್ರ ಪ್ರದರ್ಶನ ಗಮನ ಸೆಳೆದವು. ಕೊಡವ ಸಾಂಪ್ರದಾಯಿಕ ಪಂದಿಕರಿ-ಕಡುಂಬುಟ್ಟುವಿನೊಂದಿಗೆ ವಿವಿಧ ಅಡುಗೆ ವಸ್ತುಪ್ರದರ್ಶನ ಗಮನ ಸೆಳೆದವು. ಪ್ರಮುಖವಾಗಿ ಕೊಡವ ಸಾಂಪ್ರದಾಯಿಕ ಚಿಟ್ಟಾಣಿ ಪುಟ್, ಖರ್ಜಿಕಾಯಿ, ಚಟ್ಟಿಪುಟ್, ಓಡ್ ಪುಟ್, ಚೆಕ್ಕೆ ಕುರು ಪಜ್ಜಿ, ಕಾಕೆ ತೊಪ್ಪುಬರ್‍ತದ್, ಕೈಪುಳಿ ಬಜ್ಜಿ ಚುಟ್ಟದ್, ತೆರಮೆ ತೊಪ್ಪು ಬರ್‍ತದ್, ಕುರುಕರಿ ಇತ್ಯಾದಿ ಗಮನ ಸೆಳೆದವು.

ಸಾವಿರಾರು ಮಹಿಳೆಯರ ಸಮ್ಮುಖದಲ್ಲಿ ಜರುಗಿದ ವಿವಿಧ ಪೈಪೆÇೀಟಿ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯಲ್ಲದೆ ಮೈಸೂರು, ಬೆಂಗಳೂರಿನಿಂದಲೂ ಕೊಡವ ಕಲಾವಿದರು ಆಗಮಿಸಿದ್ದು, ಕಾವೇರಿ ಕಾಲೇಜು ಆವರಣದಲ್ಲಿ ರಂಗೇರಿದ ವಾತಾವರಣ ಸೃಷ್ಟಿಯಾಗಿತ್ತು.

-ವರದಿ: ಟಿ.ಎಲ್.ಶ್ರೀನಿವಾಸ್