ಸೋಮವಾರಪೇಟೆ, ಜೂ. 11: ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಯೂನೈಟೆಡ್ ಪ್ಲಾಂಟೇಷÀನ್ ವರ್ಕರ್ಸ್ ಯೂನಿಯನ್ ವತಿಯಿಂದ ತಾ. 13 ರಂದು ಸೋಮವಾರಪೇಟೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಯೂನಿಯನ್ ಅಧ್ಯಕ್ಷ ಹೆಚ್.ಎಂ. ಸೋಮಪ್ಪ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ನಿವೇಶನ ಸಮಸ್ಯೆ ಹಲವು ದಶಕಗಳಿಂದ ಇದ್ದರೂ ಇದುವರೆಗೂ ನಿರ್ಗತಿಕರಿಗೆ ನಿವೇಶನ ನೀಡಲು ಸರ್ಕಾರ ಮುಂದಾಗಿಲ್ಲ. ಈ ಹಿನ್ನೆಲೆ ನಿವೇಶನಕ್ಕೆ ಆಗ್ರಹಿಸಿ ತಾ. 13 ರಂದು ತಾಲೂಕಿನ ಕಿರಗಂದೂರು, ಐಗೂರು, ಬೇಳೂರು ಗ್ರಾಮ ಪಂಚಾಯಿತಿಗಳಿಗೆ ಮುತ್ತಿಗೆ ಹಾಕಲಾಗುವದು. ನಂತರ ನಗರದ ಕಕ್ಕೆ ಹೊಳೆಯಿಂದ ಪ್ರತಿಭಟನಾ ಮೆರವಣಿಗೆ ತೆರಳಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗುವದು ಎಂದು ಸೋಮಪ್ಪ ತಿಳಿಸಿದ್ದಾರೆ.