ಸೋಮವಾರಪೇಟೆ, ಜೂ. 11: 2016-17ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಂದ ರಾಜ್ಯ-ರಾಷ್ಟ್ರೀಯ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಿಂದ ತಲಾ 1 ಪ್ರಸ್ತಾವನೆಯನ್ನು ಸಲ್ಲಿಸಲು ಅವಕಾಶವಿದ್ದು, ಆಸಕ್ತರು ತಾ. 18 ರೊಳಗೆ ತಮ್ಮ ಪ್ರಸ್ತಾವನೆಗಳನ್ನು 5 ಪ್ರತಿಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕಿದೆ. ಅವಧಿ ಮೀರಿದ ಅರ್ಜಿಗಳನ್ನು ಪರಿಗಣಿಸುವದಿಲ್ಲ. ಅರ್ಜಿ ನಮೂನೆಗಳನ್ನು ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಪಡೆಯಬಹುದು.