ವೀರಾಜಪೇಟೆ, ನ. 28: ನಮ್ಮ ಕೊಡಗಿನಲ್ಲಿ ದಿಟ್ಟ ಮಹಿಳೆಯರು ಸಾಕಷ್ಟಿದ್ದರೂ ಏನೋ ಒಂದು ಹಿಂಜರಿಕೆ ಅವರಲ್ಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಕೊಡಗಿನ ಗೌರಮ್ಮನಂತಹ ಮಹಿಳೆಯರು ಹಲವರು ಇದ್ದಾರೆ ಎಂದು ಸಮ್ಮೆಳನಾಧ್ಯಕ್ಷೆ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ ಹೇಳಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವೀರಾಜಪೇಟೆ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ 7ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗೌರಮ್ಮನವರ ಕಥೆಗಳನ್ನು ಓದಿ ಮುಂದೆ ಬರುವವರು ಹಲವರಾದರೆ, ಹಿರಿಯ ಮಹಿಳೆಯರಾದ ಬಲ್ಯಾಟಂಡ ಮುದ್ದವ್ವ, ಪಂದ್ಯಂಡ ಸೀತಾ ಬೆಳ್ಯಪ್ಪ, ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ನಿಂತವರು. ಶಾಲೆಗಳಲ್ಲಿ ಪಾಠ-ಪ್ರವಚನಗಳ ವಿಚಾರ ಬಂದರೆ ಪ್ರಸ್ತುತ ಕನ್ನಡ ಭಾಷೆಗೆ ಯಾರೂ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿಲ್ಲ.