ಮಡಿಕೇರಿ, ನ. 23: ಮಂಜಿನ ನಗರಿ ಮಡಿಕೇರಿಯಲ್ಲಿ ಗಾನ ಸಂಭ್ರಮ, ಮಂಜಿನ ನಗರಿ ಮಡಿಕೇರಿಯಲ್ಲಿ ತಾ. 24 ರಂದು (ಇಂದು) ಸಂಜೆ 6 ಗಂಟೆಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಕನ್ನಡ ಹಳೇ ಚಲನಚಿತ್ರ ಗೀತೆಗಳ ಗಾನಯಾನ ಸಂಭ್ರಮದ ಪಯಣ ನಡೆಯಲಿದೆ.

ಶಿವಮೊಗ್ಗ ಜಿಲ್ಲೆಯ ಸಮನ್ವಯ ಕಾಶಿ ಅವರ ನೇತೃತ್ವದಲ್ಲಿ ಗಾನಯಾನ ನಡೆಯಲಿದ್ದು, ಸ್ಟಾರ್ ಸಿಂಗರ್‍ಗಳಾದ ಚೇತನ್ ನಾಯಕ್, ಹಿನ್ನೆಲೆ ಗಾಯಕಿ ದಿವ್ಯ ರಾಮಚಂದ್ರ, ಸಮನ್ವಯ ಗಾನಕೋಗಿಲೆ ರಕ್ಷಿತಾ ಅವಧಾನಿ, ಎದೆ ತುಂಬಿ ಹಾಡುವೆನು ಖ್ಯಾತಿಯ ಕಾರ್ತಿಕ್, ಉದಯನ್ಮೋಖ ಕಲಾವಿದೆ ನಿವೇದಿತಾ ಅವರು ಗಾನಯಾನ ನಡೆಸಿಕೊಡಲಿದ್ದಾರೆ.

ವಾದ್ಯಗೋಷ್ಠಿಯು ದೀಪಕ್ ಅವರ ಸಾರಥ್ಯದಲ್ಲಿ ನಡೆಯಲಿದ್ದು, ತಬಲಾ-ದೋಲಕ್ ಮುನ್ನ, ರಿದಂನ್ನು ಮೋನಿಕ್, ಗಿಟಾರ್ ಅನ್ನು ಚೆನ್ನೈ ನಗರದ ರೆಹಮಾನ್ ಸಂಗೀತ ಶಾಲೆಯ ವಿರೇಶ್ ನಡೆಸಿಕೊಡಲಿದ್ದಾರೆ. ಸಮನ್ವಯ ಕಾಶಿ ಅವರು ಕರ್ನಾಟಕ ಏಕೀಕರಣದ 60 ವರ್ಷದ ಅಂಗವಾಗಿ ಗಾನಯಾನ ಕಾರ್ಯಕ್ರಮದ ವಿಶೇಷತೆ, ಮಹತ್ವದ ಬಗ್ಗೆ ಬೆಳಕು ಚೆಲ್ಲಲಿದ್ದಾರೆ.

ಕಾರ್ಯಕ್ರಮಕ್ಕೆ ಜಿ.ಪಂ.ಅಧ್ಯಕ್ಷ ಬಿ.ಎ. ಹರೀಶ್, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ನಗರಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಸಾಗರ್, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ. ಅನಂತಶಯನ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.