ಗೋಣಿಕೊಪ್ಪಲು, ಜೂ. 10: ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಎಸ್.ಎನ್. ಪಂಚಮಿ ರಾಜ್ಯಶಾಸ್ತ್ರ (ಅಂತರರಾಷ್ಟ್ರೀಯ ಸಂಬಂಧಗಳು) ವಿಷಯದಲ್ಲಿ ಮಂಗಳೂರು ವಿ.ವಿ.ಗೆ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

ಮಂಗಳೂರು ಮಂಗಳ ಗಂಗೋತ್ರಿ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ಮುಗಿದ ಘಟಿಕೋತ್ಸವದಲ್ಲಿ ಪಂಚಮಿಗೆ ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ಅವರು ಚಿನ್ನದ ಪದಕ ಹಾಗೂ ನಗದು ನೀಡುವ ಮೂಲಕ ಪದವಿ ಪ್ರದಾನ ಮಾಡಿದರು.

ಈಕೆ ದಕ್ಷಿಣ ಕೊಡಗಿನ ಕುಟ್ಟ ಸಮೀಪ ಪೂಜೆಕಲ್ಲು ನಿವಾಸಿ ಎಸ್.ಎಲ್. ನಂಜಪ್ಪ (ಕೆಂಪು) ಹಾಗೂ ಎಸ್.ಎನ್. ರಶ್ಮಿ ಇವರ ಪುತ್ರಿಯಾಗಿದ್ದು, ಇದೀಗ ಮೈಸೂರು ಮಾನಸ ಗಂಗೋತ್ರಿಯಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ರಾಜ್ಯಶಾಸ್ತ್ರವನ್ನು ಅಧ್ಯಯನ ಮಾಡುತ್ತಿದ್ದಾಳೆ.