ಕರಿಕೆ, ಜೂ. 14: ಕರಿಕೆ ಭರೂಕ ಸಂಸ್ಥೆ ವತಿಯಿಂದ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಸಭೆಯನ್ನು ಉದ್ದೇಶಿಸಿ ಭರೂಕ ಸಂಸ್ಥೆಯ ವ್ಯವಸ್ಥಾಪಕ ಶಿವಶಂಕರ್ ಬಿರಾದಾರ್ ಮಾತನಾಡಿ, ಪ್ರಸ್ತುತ ಜಾಗತಿಕ ತಾಪಮಾನದ ಹಿನ್ನೆಲೆಯಲ್ಲಿ ಪರಿಸರಕ್ಕೆ ಪೂರಕವಾದಂತಹ ಸೌರಶಕ್ತಿ, ಗಾಳಿ ಹಾಗೂ ಜಲವಿದ್ಯುತ್‍ನಿಂದ ವಿದ್ಯುತ್ ಉತ್ಪಾದಿಸಿದರೆ, ಪರಿಸರಕ್ಕೆ ಯಾವದೇ ಹಾನಿಯಿಲ್ಲ. ನಾವು ನಮ್ಮ ಪರಿಸರದ ಸುತ್ತಮುತ್ತ ಪ್ಲಾಸ್ಟಿಕ್ ಬಳಕೆಯನ್ನು ಬಿಟ್ಟು , ಬಟ್ಟೆ ಚೀಲ ಬಳಸುವಂತೆ ಸಲಹೆ ನೀಡಿದರು.

ಸಿಬ್ಬಂದಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡರು. ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಹೊದ್ದೆಟ್ಟಿ ಸುಧೀರ್ ಕುಮಾರ್ ವಹಿಸಿದ್ದರು. ಈ ಸಂದರ್ಭ ಯೋಗ ಗುರುಗಳಾದ ನಾರಾಯಣ ಸ್ವಾಮಿ, ಸಿಬ್ಬಂದಿಗಳು ಹಾಗೂ ಕಾರ್ಮಿಕರು ಇದ್ದರು. ಘಟಕದ ಸಹಾಯಕ ಇಂಜಿನಿಯರ್ ಚಂದ್ರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುಮಾರು 40 ಗಿಡಗಳನ್ನು ಇದೇ ಸಂದರ್ಭ ನೆಡಲಾಯಿತು.